ಆನುಷಂಗಿಕ ಮೊಗ್ಗುಗಳು-
	ಕಕ್ಷಗಳಿಂದ ಕುಡಿಯೊಡೆಯುವ ಹೆಚ್ಚುವರಿ ಮೊಗ್ಗುಗಳು (ಅಕ್ಸೆಸ್ಸರಿ ಬಡ್ಸ್). ಡ್ಯೂರಂಟಾ ಎಂಬ ಮುಳ್ಳುಗಿಡದಲ್ಲಿ ಇವನ್ನು ಕಾಣಬಹುದು. ಅರಿಸ್ಟೂಲಾಕಿಯಾ, ವಾಲ್‍ನಟ್ ಇವುಗಳಲ್ಲಿನ ಆನುಷಂಗಿಕ ಮೊಗ್ಗುಗಳು ಒಂದರ ಮೇಲೊಂದು ಕುಡಿಯೊಡಿಯುತ್ತವೆ. ಅವನ್ನು ಆಚ್ಛಾದಿತ ಮೊಗ್ಗುಗಳೆನ್ನುತ್ತಾರೆ. (ಸೂಪರ್ ಪೋಸ್ಡ್ ಬಡ್ಸ್). ಪಲಾಂಡು (ಲಿಲಿಯೇಸಿ) ಮತ್ತು ದತ್ತೂರ ಜಾತಿಯ (ಸೊಲೆನೇಸಿ ಕುಟುಂಬದ) ಬದನೆ ಮತ್ತು ಮೆಣಸಿನ ಗಿಡಗಳ ಕಕ್ಷಗಳಲ್ಲಿ ಅಕ್ಕಪಕ್ಕಗಳಿಂದ ಮೊಗ್ಗುಗಳು ಕುಡಿಯೊಡೆಯುತ್ತವೆ. ಕೆಲವೊಮ್ಮೆ ಅವು ಗೊಂಚಲು ಗೊಂಚಲಾಗಿರುವುದೂ ಉಂಟು. ಗೊಂಚಲುಗಳು ಸಂಯೋಗಗೊಂಡು ಸಂಕೀರ್ಣ ಕೊಂಬೆಯಾಗಿ ರೂಪಾಂತರಗೊಳ್ಳುವುದುಂಟು. ಅಮರಬಳ್ಳಿ ಎಂಬ ಪರಾವಲಂಬಿ ಬಳ್ಳಿಯಲ್ಲಿನ ಏಕೈಕ ಮೂಲಮೊಗ್ಗು ಕವಲೊಡೆದು ಒಂದೇ ಕಕ್ಷದಿಂದ ಅನೇಕ ಆನುಷಂಗಿಕ ಮೊಗ್ಗುಗಳನ್ನು ಕುಡಿಯೊಡೆಸುವುದು.	
(ಎಂ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ